ಆಂಡ್ರೂ, ಥಾಮಸ್
(1813-1885). ಐರ್ಲೆಂಡಿನ ರಸಾಯನಶಾಸ್ತ್ರಜ್ಞ. ಗ್ಲಾಸ್ಗೊ, ಪ್ಯಾರಿಸ್‍ಗಳಲ್ಲಿ ರಸಾಯನಶಾಸ್ತ್ರವನ್ನೂ ಎಡಿನ್‍ಬರೊದಲ್ಲಿ ವೈದ್ಯಶಾಸ್ತ್ರವನ್ನೂ ಅಧ್ಯಯನ ಮಾಡಿದ. ಜನ್ಮಸ್ಥಳವಾದ ಬೆಲ್‍ಫಾಸ್ಟ್‍ನಲ್ಲೇ 1849-1879ರ ವರೆಗೆ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಭೌತಶಾಸ್ತ್ರದ ಒಂದು ಪ್ರಮುಖಭಾಗವಾದ ಅನಿಲದ್ರವೀಕರಣವನ್ನು ವಿಶೇಷವಾಗಿ ಅಧ್ಯಯಿಸಿದ. ಓeóÉೂೀನ್ ಅನಿಲ ಮತ್ತು ರಾಸಾಯನಿಕ ದಹನದಿಂದ ಉತ್ಪತ್ತಿಯಾಗುವ ಉಷ್ಣದ ಬಗ್ಗೆ ಹೆಚ್ಚಿನ ಕೆಲಸಮಾಡಿದ. 				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ